Photo de l'auteur
9 oeuvres 13 utilisateurs 1 Critiques

Critiques

ನಾನು ಇಲ್ಲಿಯವರಿಗೂ ಓದಿದ ಅತ್ಯಂತ ಶ್ರೇಷ್ಠ ಕಾದಂಬರಿಗಳ ಪಟ್ಟಿಗೆ ಇದು ಹೊಸ (ಪ್ರಕಟವಾಗಿ ನಲವತ್ತು ವರ್ಷಗಳ ನಂತರ) ಸೇರ್ಪಡೆ. 'ಶಿಕಾರಿ'ಯನ್ನು ಸುಮಾರು ಐದಾರು ಬಾರಿ ಓದಲು ಪ್ರಯತ್ನಿಸಿ ಸೋತ ನಾನು ಈ ಒಮ್ಮೆ ಪಟ್ಟು ಹಿಡಿದು ಓದಲು ಕೂತೆ. ಕಾದಂಬರಿಯ ಒಳಹೊಕ್ಕು ಅದನ್ನು ಓದಿ ಮುಗಿಸುವವವರೆಗೂ ಅದರ ಗುಂಗಿನಿಂದ ಹೊರಬರಲು ಆಗಲೇ ಇಲ್ಲ. ಎಪ್ಪತ್ತರ ದಶಕದ ಮುಂಬೈಯಿನ ಕಾರ್ಪೊರೇಟ್ ಜಗತ್ತಿನಲ್ಲಿ ನಡೆಯುವ ಕತೆ ಇಂದಿಗೂ ಪ್ರಸ್ತುತವೆನಿಸುತ್ತದೆ. ಐಟಿಕರಣದ ನಂತರದ ಬೆಂಗಳೂರು ಈ ರೀತಿಯ ಕಾದಂಬರಿಗೆ ಒದಗಿ ಬಂದರೂ ನನಗೆ ತಿಳಿದ ಮಟ್ಟಿಗೆ ಕನ್ನಡದಲ್ಲಿ ಈ ಶೈಲಿಯ ಇನ್ನೊಂದು ಕೃತಿ ಬರದೇ ಹೋದದ್ದು ವಿಪರ್ಯಾಸವೇ ಸರಿ. ಚಿತ್ತಾಲರು ತೀರಿಕೊಂಡು ಸುಮಾರು ಮೂರು ವರ್ಷಗಳ ನಂತರ ಈ ಕಾದಂಬರಿ ಇಂಗ್ಲಿಷ್ ಅನುವಾದ ಕಂಡಿದೆ. ಅದನ್ನೂ ಓದುವ ಕುತೂಹಲವಿದೆ.
 
Signalé
harsharaghuram | Mar 8, 2024 |